RbI jobs karnataka 2026 ರಿಸರ್ವ್ ಬ್ಯಾಂಕ್‌ನಲ್ಲಿ ಭರ್ಜರಿ ನೇಮಕಾತಿ 2026: ಕನ್ನಡಿಗರಿಗೆ ಇಲ್ಲಿದೆ ಸುವರ್ಣಾವಕಾಶ!

RbI jobs karnataka 2026 ರಿಸರ್ವ್ ಬ್ಯಾಂಕ್‌ನಲ್ಲಿ ಭರ್ಜರಿ ನೇಮಕಾತಿ 2026: ಕನ್ನಡಿಗರಿಗೆ ಇಲ್ಲಿದೆ ಸುವರ್ಣಾವಕಾಶ!

​1. RBI Recruitment 2026: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಹುಡುಕುತ್ತಿರುವವರಿಗೆ ಗುಡ್ ನ್ಯೂಸ್ ಕೊಟ್ಟ ಆರ್‌ಬಿಐ !

​ನೀವು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಒಂದು ಉತ್ತಮ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ದೊಡ್ಡ ಸುವರ್ಣಾವಕಾಶ. ಭಾರತದ ಅತ್ಯುನ್ನತ ಬ್ಯಾಂಕಿಂಗ್ ಸಂಸ್ಥೆಯಾದ ಭಾರತೀಯ ರಿಸರ್ವ್ ಬ್ಯಾಂಕ್ (RBI) ಇದೀಗ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ದೇಶದ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬಾಗಿರುವ ಈ ಸಂಸ್ಥೆಯಲ್ಲಿ ಕೆಲಸ ಮಾಡುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಆದ್ರೆ ಈಗ ಆ ಕನಸನ್ನು ನನಸು ಮಾಡಿಕೊಳ್ಳುವ ಸಮಯ ಬಂದಿದೆ ಎಲ್ಲರೂ ಸಿದ್ಧವಾಗಿರಿ.

​2. ಹುದ್ದೆಗಳ ವಿವರ ಮತ್ತು ಸಂಖ್ಯೆ (Vacancy Details)

​ರಿಸರ್ವ್ ಬ್ಯಾಂಕ್ ಈ ಬಾರಿ ಗ್ರೇಡ್ ಬಿ (Grade B) ಅಧಿಕಾರಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು ಖಾಲಿ ಇರುವ ಹುದ್ದೆಗಳ ಎಷ್ಟಿವೆ ಮತ್ತು ವಿವರ ಈ ಕೆಳಗಿನಂತಿದೆ:

  • ಆಫೀಸರ್ ಗ್ರೇಡ್ ‘ಬಿ’ (General): 40 ಹುದ್ದೆಗಳು ಖಾಲಿ ಇವೆ
  • ಆಫೀಸರ್ ಗ್ರೇಡ್ ‘ಬಿ’ (DEPR): 10 ಹುದ್ದೆಗಳು ಖಾಲಿ ಇವೆ
  • ​ಆಫೀಸರ್ ಗ್ರೇಡ್ ‘ಬಿ’ (DSIM): 10 ಹುದ್ದೆಗಳು ಖಾಲಿ ಇವೆ
  • ಒಟ್ಟು ಹುದ್ದೆಗಳು: 60 ಹುದ್ದೆಗಳ ಅವಕಾಶವೆ.

​ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ದೇಶದ ವಿವಿಧ ಭಾಗಗಳಲ್ಲಿರುವ ಆರ್‌ಬಿಐ ಕಚೇರಿಗಳಲ್ಲಿ ಕೆಲಸ ಮಾಡಬೇಕಾಗುತ್ತದೆ.

​3. ಶೈಕ್ಷಣಿಕ ಅರ್ಹತೆ ಏನಿರಬೇಕು? (Educational Qualification)

​ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಈ ಕೆಳಗಿನ ಅರ್ಹತೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು.

  • Grade B (General): ಯಾವುದೇ ವಿಷಯದಲ್ಲಿ ಪದವಿ (Degree) ಪಡೆದಿದ್ದು, ಕನಿಷ್ಠ 60% ಅಂಕಗಳನ್ನು ಹೊಂದಿರಬೇಕು (SC/ST ಅಭ್ಯರ್ಥಿಗಳಿಗೆ 50%). ಅಂಕಗಳನ್ನು ಪಡೆದಿರಬೇಕು
  • DEPR/DSIM: ಸಂಬಂಧಪಟ್ಟ ವಿಷಯಗಳಲ್ಲಿ (Economics/Statistics) ಸ್ನಾತಕೋತ್ತರ ಪದವಿ (Master’s Degree) ಪೂರ್ಣಗೊಳಿಸಿರಬೇಕು.

​4. ವಯೋಮಿತಿ ಮತ್ತು ಸಡಿಲಿಕೆ (Age Limit)

​ಅಭ್ಯರ್ಥಿಗಳ ಕನಿಷ್ಠ ವಯಸ್ಸು 21 ವರ್ಷ ತುಂಬಿರಬೇಕು ಮತ್ತು ಗರಿಷ್ಠ ವಯಸ್ಸು 30 ವರ್ಷ ಮೀರಿರಬಾರದು. ಮತ್ತು ಸರ್ಕಾರದ ನಿಯಮದಂತೆ ಮೀಸಲಾತಿ ವರ್ಗದವರಿಗೆ ವಯೋಮಿತಿ ಸಡಿಲಿಕೆ ಇರುತ್ತದೆ:

  • ​OBC ಅಭ್ಯರ್ಥಿಗಳಿಗೆ: 3 ವರ್ಷ ಸಡಿಲಿಕೆ ಇರುತ್ತದೆ.
  • ​SC/ST ಅಭ್ಯರ್ಥಿಗಳಿಗೆ: 5 ವರ್ಷ ಸಡಿಲಿಕೆ ಇರುತ್ತದೆ.
  • ಅಂಗವಿಕಲ ಅಭ್ಯರ್ಥಿಗಳಿಗೆ: 10 ವರ್ಷ ಸಡಿಲಿಕೆ ಇರುತ್ತದೆ.

​5. ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ದಿನಾಂಕಗಳು (Selection Process)

​ಆರ್‌ಬಿಐ ಅಧಿಕಾರಿಯಾಗಲು ಅಭ್ಯರ್ಥಿಗಳು ಮೂರು ಹಂತದ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ ಅದಕ್ಕಾಗಿ ಗಮನವಿಟ್ಟು ಓದಿಕೊಳ್ಳಿ:

  • ​ಹಂತ 1 (Phase-I): ಆನ್‌ಲೈನ್ ಪರೀಕ್ಷೆ (ಪ್ರಿಲಿಮ್ಸ್) – ದಿನಾಂಕ: 13 ಜೂನ್ 2026ರಂದು ನಡೆಯುತ್ತದೆ.
  • ಹಂತ 2 (Phase-II): ಮುಖ್ಯ ಪರೀಕ್ಷೆ (ಮೇನ್ಸ್) – ದಿನಾಂಕ: 25 ಜುಲೈ 2026ರಂದು ನಡೆಯುತ್ತದೆ
  • ಹಂತ 3: ವೈಯಕ್ತಿಕ ಸಂದರ್ಶನ (Interview).

​ಈ ಮೂರು ಹಂತಗಳಲ್ಲಿ ಉತ್ತಮ ಅಂಕ ಗಳಿಸಿದ ಅಭ್ಯರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ.

Mouth Cancer Bangalore Youth Warning ಬೆಂಗಳೂರು ಯುವಕರಿಗೆ ಆಘಾತ!  ಬಾಯಿ ಕ್ಯಾನ್ಸರ್ ಬಗ್ಗೆ ತಜ್ಞರ ಎಚ್ಚರಿಕೆ!

6. ಅರ್ಜಿ ಸಲ್ಲಿಸುವ ವಿಧಾನ ಮತ್ತು ಪ್ರಮುಖ ದಿನಾಂಕಗಳು

​ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿಯನ್ನು ಆರ್‌ಬಿಐನ ಅಧಿಕೃತ ವೆಬ್‌ಸೈಟ್‌ನಲ್ಲಿ ಸಲ್ಲಿಸಬೇಕಾಗುತ್ತದೆ.

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 29 ಏಪ್ರಿಲ್ 2026 ಆರಂಭಗೊಳ್ಳುತ್ತದೆ
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20 ಮೇ 2026 (ಸಂಜೆ 6 ಗಂಟೆಯವರೆಗೆ) ಇರುತ್ತದೆ

ಅಧಿಕೃತ ವೆಬ್‌ಸೈಟ್: www.rbi.org.in

​7. ಸಂಬಳ ಮತ್ತು ಸೌಲಭ್ಯಗಳು (Salary & Benefits)

​ಆರ್‌ಬಿಐನಲ್ಲಿ ಕೆಲಸ ಸಿಗುವುದು ಎಂದರೆ ಕೇವಲ ಉದ್ಯೋಗವಲ್ಲ, ಅದೊಂದು ಗೌರವದ ವಿಷಯವಾಗಿದೆ. ಇಲ್ಲಿ ಸಿಗುವ ವೇತನ ಮತ್ತು ಸೌಲಭ್ಯಗಳು ಬೇರೆ ಯಾವುದೇ ಬ್ಯಾಂಕ್‌ಗಳಿಗಿಂತ ಅತ್ಯುತ್ತಮವಾಗಿದೆ.

  • ಆರಂಭಿಕ ಸಂಬಳ: ಒಬ್ಬ ಗ್ರೇಡ್ ‘ಬಿ’ ಅಧಿಕಾರಿಯ ಮೂಲ ವೇತನವೇ ಸರಿಸುಮಾರು 55,200 ರೂ. ಇರುತ್ತದೆ. ಇದಕ್ಕೆ ಭತ್ಯೆಗಳೆಲ್ಲ ಸೇರಿದರೆ ತಿಂಗಳಿಗೆ ನಿಮ್ಮ ಕೈಗೆ ಬರುವ ಒಟ್ಟು ಸಂಬಳ 1,16,000 ರೂ. ನಿಂದ 1,50,000 ರೂ. ವರೆಗೆ ಸಂಬಳ ಇರುತ್ತದೆ.
  • ಇತರ ಸೌಲಭ್ಯಗಳು: ವಸತಿ ಸೌಲಭ್ಯ (Quarters), ವಾಹನ ಭತ್ಯೆ, ಮಕ್ಕಳ ಶಿಕ್ಷಣಕ್ಕೆ ಸಹಾಯಧನ, ವೈದ್ಯಕೀಯ ವೆಚ್ಚಗಳು ಮತ್ತು ದೇಶಾದ್ಯಂತ ಪ್ರವಾಸ ಮಾಡಲು ಎಲ್‌ಟಿಸಿ (LTC) ಸೌಲಭ್ಯ ಕೂಡ ದೊರೆಯುತ್ತದೆ. ಇಷ್ಟೊಂದು ಸೌಲಭ್ಯಗಳಿರುವ ಕಾರಣಕ್ಕಾಗಿಯೇ ಇದನ್ನು ‘ಬ್ಯಾಂಕರ್‌ಗಳ ಬ್ಯಾಂಕ್‌’ ಎಂದು ಕೂಡ ಕರೆಯುತ್ತಾರೆ.

​8. ಪರೀಕ್ಷೆಯ ಪಠ್ಯಕ್ರಮ ಹೇಗಿರುತ್ತೆ? (Syllabus)

​ಪರೀಕ್ಷೆಗೆ ಸಿದ್ಧತೆ ನಡೆಸುವ ಮುನ್ನ ಪಠ್ಯಕ್ರಮದ ಬಗ್ಗೆ ಸರಿಯಾದ ಕಲ್ಪನೆ ಇರ್ಲೇಬೇಕು. ಇದು ಕಷ್ಟ ಎನಿಸಿದರೂ, ಸರಿಯಾದ ಪ್ಲಾನಿಂಗ್ ಇದ್ದರೆ ಮಾತ್ರ ಸುಲಭವಾಗಿ ನೀವುಗಳು ಗೆಲ್ಲಬಹುದು.

  • Phase 1 (ಪೂರ್ವಭಾವಿ ಪರೀಕ್ಷೆ): ಇದರಲ್ಲಿ ಸಾಮಾನ್ಯ ಜ್ಞಾನ (General Awareness), ಇಂಗ್ಲಿಷ್ ಭಾಷೆ, ಗಣಿತ (Quantitative Aptitude) ಮತ್ತು ತಾರ್ಕಿಕ ಚಿಂತನೆ (Reasoning) ವಿಷಯಗಳ ಬಗ್ಗೆ ಪ್ರಶ್ನೆಗಳಿರುತ್ತವೆ.
  • Phase 2 (ಮುಖ್ಯ ಪರೀಕ್ಷೆ): ಇದರಲ್ಲಿ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳು, ಇಂಗ್ಲಿಷ್ ಬರವಣಿಗೆ (Descriptive) ಹಾಗೂ ಫೈನಾನ್ಸ್ ಮತ್ತು ಮ್ಯಾನೇಜ್‌ಮೆಂಟ್ ವಿಷಯಗಳ ಬಗ್ಗೆ ಪರೀಕ್ಷೆ ನಡೆಯುತ್ತದೆ. ಅದಕ್ಕಾಗಿ ಮುಂಚಿತವಾಗಿನೇ ಎಲ್ಲಾ ವಿಷಯಗಳಿಗೆ ತಿಳಿದುಕೊಳ್ಳುವುದು ಉತ್ತಮ.

​9. ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

​ಅರ್ಜಿ ಸಲ್ಲಿಸುವಾಗ ಯಾವುದೇ ತಪ್ಪುಗಳಾಗದಂತೆ ಈ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ:

  • ​ಅಭ್ಯರ್ಥಿಯ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋವನ್ನು ಹೊಂದಿರಬೇಕು.
  • ​ಸ್ಕ್ಯಾನ್ ಮಾಡಿದ ಸಹಿ (Signature).
  • ​ಎಡಗೈ ಹೆಬ್ಬೆರಳಿನ ಗುರುತು (Left Thumb Impression).
  • ​ಸ್ವಯಂ ಘೋಷಿತ ಪತ್ರ (Handwritten Declaration).
  • ​ನಿಮ್ಮ ಆಧಾರ್ ಕಾರ್ಡ್ ಅಥವಾ ಇನ್ನಾವುದೇ ಗುರುತಿನ ಚೀಟಿ.  ಕಡ್ಡಾಯವಾಗಿ ಎಲ್ಲವನ್ನು ಮುಂಚಿತವಾಗಿನಿ ಸಿದ್ಧಪಡಿಸಿಕೊಳ್ಳಿ.

​10. ಪರೀಕ್ಷಾ ಕೇಂದ್ರಗಳು ಎಲ್ಲಿರುತ್ತವೆ?

​ಕರ್ನಾಟಕದ ಅಭ್ಯರ್ಥಿಗಳಿಗೆ ರಾಜ್ಯದ ಪ್ರಮುಖ ನಗರಗಳಲ್ಲೇ ಪರೀಕ್ಷೆ ಬರೆಯಲು ಅವಕಾಶವಿರುತ್ತದೆ. ಸಾಮಾನ್ಯವಾಗಿ ಈ ಕೆಳಗಿನ ನಗರಗಳಲ್ಲಿ ಪರೀಕ್ಷಾ ಕೇಂದ್ರಗಳಿರುತ್ತವೆ:

  • ​ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡ, ಮಂಗಳೂರು, ಕಲಬುರಗಿ ಮತ್ತು ಬೆಳಗಾವಿ. ಇವುಗಳಿಗೆ ನಿಮಗೆ ಪರೀಕ್ಷೆಯ ಕೇಂದ್ರಗಳು ಇರುತ್ತವೆ
  • ​ಅರ್ಜಿ ಸಲ್ಲಿಸುವಾಗ ನಿಮ್ಮ ಮನೆಗೆ ಹತ್ತಿರವಿರುವ ನಗರವನ್ನೇ ಪರೀಕ್ಷಾ ಕೇಂದ್ರವನ್ನಾಗಿ ಆಯ್ಕೆ ಮಾಡಿಕೊಳ್ಳುವುದು ಉತ್ತಮ.

CRPF Recruitment 2026 Kannada: 9195 ಕಾನ್ಸ್‌ಟೇಬಲ್ ಹುದ್ದೆಗಳಿಗೆ ಭರ್ಜರಿ ನೇಮಕಾತಿ; ಅರ್ಜಿ ಸಲ್ಲಿಸಲು ಇಲ್ಲಿದೆ ಲಿಂಕ್!

11. ಅರ್ಜಿ ಸಲ್ಲಿಸುವುದು ಹೇಗೆ? (Step-by-Step)

  1. ​ಮೊದಲು ಆರ್‌ಬಿಐನ ಅಧಿಕೃತ ವೆಬ್‌ಸೈಟ್ www.rbi.org.in ಗೆ ಭೇಟಿ ನೀಡಿ.
  2. ​ಅಲ್ಲಿ ‘Opportunities@RBI’ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.
  3. ​ನಂತರ ‘Current Vacancies’ ವಿಭಾಗದಲ್ಲಿರುವ ‘Recruitment for the post of Grade B’ ಲಿಂಕ್ ಆರಿಸಿಕೊಳ್ಳಿ.
  4. ​’Click here for New Registration’ ಕೊಟ್ಟು ನಿಮ್ಮ ಮಾಹಿತಿ ಸಂಪೂರ್ಣವಾಗಿ ಅಲ್ಲಿ ಭರ್ತಿ ಮಾಡಿ.
  5. ​ಫೋಟೋ ಮತ್ತು ಸಹಿ ಅಪ್‌ಲೋಡ್ ಮಾಡಿ ಅರ್ಜಿ ಶುಲ್ಕ ಪಾವತಿಸಿ.

ಇವೆಲ್ಲವನ್ನೂ ಸಂಪೂರ್ಣವಾಗಿ ಭರ್ತಿ ಮಾಡಿದ ನಂತರ ಸಬ್ಮಿಟ್ ಮಾಡಿ.

  • ​ಕೊನೆಯದಾಗಿ ಅರ್ಜಿಯ ಒಂದು ಪ್ರಿಂಟ್ ಔಟ್ ತೆಗೆದುಕೊಳ್ಳುವುದನ್ನು ಮರೆಯಬೇಡಿ.

12. ಪರೀಕ್ಷಾ ಸಿದ್ಧತೆಗಾಗಿ ಕೆಲವು ಟಿಪ್ಸ್ (Preparation Strategy)

​ಬರಿ ಅರ್ಜಿ ಸಲ್ಲಿಸಿದರೆ ಸಾಲದು, ಪರೀಕ್ಷೆಯಲ್ಲಿ ಗೆಲ್ಲಲು ಒಂದು ಸರಿಯಾದ ಹಾದಿ ಬೇಕಾಗುತ್ತದೆ. ಅದಕ್ಕಾಗಿ ಈ ಕೆಳಗಿನ ಕ್ರಮಗಳನ್ನು ಸ್ವಲ್ಪ ಅನುಸರಿಸಿ:

  • ದಿನಪತ್ರಿಕೆಗಳನ್ನು ಓದಿ: ಪ್ರತಿದಿನ ಆರ್ಥಿಕ ಸುದ್ದಿಗಳಿಗಾಗಿ ‘The Hindu’ ಅಥವಾ ‘Economic Times’ ಓದುವ ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮ ಜನರಲ್ ಅವೇರ್ನೆಸ್ ಹೆಚ್ಚಿಸುತ್ತದೆ ಸ್ವಲ್ಪ ಮಟ್ಟಿಗೆ ಮಾಹಿತಿ ಸಿಗುತ್ತದೆ.
  • ​ಹಳೆಯ ಪ್ರಶ್ನೆ ಪತ್ರಿಕೆ: ಕಳೆದ 5 ವರ್ಷಗಳ ಆರ್‌ಬಿಐ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ. ಇದರಿಂದ ಪ್ರಶ್ನೆಗಳು ಯಾವ ರೀತಿ ಇರುತ್ತವೆ ಎಂಬ ಕಲ್ಪನೆ ಬರುತ್ತದೆ ಮತ್ತು ಸ್ವಲ್ಪ ಧೈರ್ಯ ಕೂಡ ಬರುತ್ತದೆ.
  • ಮಾಕ್ ಟೆಸ್ಟ್: ಆನ್‌ಲೈನ್‌ನಲ್ಲಿ ಲಭ್ಯವಿರುವ ಉಚಿತ ಮಾಕ್ ಟೆಸ್ಟ್ ಸರಣಿಗಳನ್ನು ತೆಗೆದುಕೊಳ್ಳಿ. ಇದು ನಿಮ್ಮ ಸಮಯ ನಿರ್ವಹಣೆಯನ್ನು (Time Management) ಉತ್ತಮಗೊಳಿಸುತ್ತದೆ.

​13. ಅರ್ಜಿದಾರರ ಗಮನಕ್ಕೆ ಮುಖ್ಯ ಸೂಚನೆಗಳು

  1. ​ಅರ್ಜಿ ಸಲ್ಲಿಸುವಾಗ ಸಣ್ಣ ತಪ್ಪು ಮಾಡಿದರೂ ನಿಮ್ಮ ಅರ್ಜಿ ತಿರಸ್ಕೃತವಾಗಬಹುದು. ಆದ್ದರಿಂದ ಇವುಗಳನ್ನು ಸರಿಯಾಗಿ ನೆನಪಿಟ್ಟುಕೊಳ್ಳಿ:
  2. ​ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಸಕ್ರಿಯವಾಗಿರಲಿ (Active), ಏಕೆಂದರೆ ಎಲ್ಲಾ ಮಾಹಿತಿಗಳು ಅಲ್ಲಿಗೆ SMS ಮೂಲಕವೇ ಬರುತ್ತವೆ.
  3. ​ಫೋಟೋ ಮತ್ತು ಸಹಿ ಸ್ಪಷ್ಟವಾಗಿರಲಿ, ಮಸುಕಾಗಿದ್ದರೆ ಅಪ್‌ಲೋಡ್ ಮಾಡಬೇಡಿ.
  4. ​ಅರ್ಜಿ ಸಲ್ಲಿಸಲು ಕೊನೆಯ ದಿನದವರೆಗೂ ಕಾಯಬೇಡಿ, ಏಕೆಂದರೆ ಸರ್ವರ್ ಸಮಸ್ಯೆ ಉಂಟಾಗಬಹುದು ಅದಕ್ಕಾಗಿ ಮುಂಚಿತವಾಗಿನೇ ಎಲ್ಲಾ ದಾಖಲಾತಿಗಳನ್ನು ಸಿದ್ದಪಡಿಸಿಟ್ಟುಕೊಳ್ಳಿ ಅಧಿಕೃತ ನೋಟಿಫಿಕೇಶನ್ ಬಂದ ಮೇಲೆಯೇ ಬೇಗನೆ ಅರ್ಜಿ ಸಲ್ಲಿಸಿ ಮತ್ತು ಆಗಾಗ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಚೆಕ್ ಮಾಡ್ತಾ ಇರಿ.

​14. ಅಧಿಕೃತ ಸಂಪರ್ಕ ಮಾಹಿತಿ (Helpdesk)

​ನಿಮಗೆ ಅರ್ಜಿ ಸಲ್ಲಿಸುವಾಗ ಏನಾದರೂ ತಾಂತ್ರಿಕ ತೊಂದರೆ ಎದುರಾದರೆ ಅಥವಾ ಹೆಚ್ಚಿನ ಮಾಹಿತಿ ಬೇಕಿದ್ದರೆ, ಆರ್‌ಬಿಐನ ಅಧಿಕೃತ ಸಹಾಯವಾಣಿಯನ್ನು ಸಂಪರ್ಕಿಸಬಹುದು ನಿಮಗೆ ಉಚಿತವಾಗಿ ಸಹಾಯ ಸಿಗುತ್ತದೆ:

ಅಧಿಕೃತ ವೆಬ್‌ಸೈಟ್: https://opportunities.rbi.org.in

  • ​ವಿಳಾಸ: ಸೆಂಟ್ರಲ್ ಆಫೀಸ್ ಬಿಲ್ಡಿಂಗ್, ಶಾಹಿದ್ ಭಗತ್ ಸಿಂಗ್ ರೋಡ್, ಮುಂಬೈ – 400001. ಸಹಾಯವಾಣಿಯ ಆಫೀಸ್ ವಿಳಾಸ

​ತೀರ್ಮಾನ

​ಈ ಲೇಖನದಲ್ಲಿ ನಾವು RBI Recruitment 2026 ರ ಬಗ್ಗೆ ಸಂಪೂರ್ಣ ಮತ್ತು ಅಧಿಕೃತ ಮಾಹಿತಿಯನ್ನು ನೀಡಿದ್ದೇವೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೇರಲು ಬಯಸುವ ಕನ್ನಡಿಗರಿಗೆ ಇದೊಂದು ಅತ್ಯುತ್ತಮ ಅವಕಾಶ ಇದನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳಿ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಮತ್ತು ಉದ್ಯೋಗಾಕಾಂಕ್ಷಿಗಳ ವಾಟ್ಸಾಪ್ ಗ್ರೂಪ್‌ಗಳಲ್ಲಿ ಹಂಚಿಕೊಳ್ಳಲು ಮರೆಯಬೇಡಿ. ಶುಭವಾಗಲಿ!

15. ಓದುಗರೇ ಗಮನಿಸಿ: ಇದು ಕೇವಲ ಕೆಲಸವಲ್ಲ, ಒಂದು ಭವಿಷ್ಯ!

​ನೋಡಿ ಗೆಳೆಯರೇ, ಸರ್ಕಾರಿ ಕೆಲಸ ಅಂದ ತಕ್ಷಣ ನಾವೆಲ್ಲರೂ ಮೊದಲು ಯೋಚಿಸುವುದು ‘ಸೆಕ್ಯೂರಿಟಿ’ ಬಗ್ಗೆ. ಆದರೆ ಆರ್‌ಬಿಐ (RBI) ಕೆಲಸ ಅಂದರೆ ಅದು ಕೇವಲ ಸೆಕ್ಯೂರಿಟಿ ಮಾತ್ರವಲ್ಲ, ಅದೊಂದು ಗೌರವ ಒಂದು  ಬದುಕುವಾಗಿದೆ. ನಿಮ್ಮೂರಿನಲ್ಲಿ ಅಥವಾ ನಿಮ್ಮ ಕುಟುಂಬದಲ್ಲಿ “ನಾನು ರಿಸರ್ವ್ ಬ್ಯಾಂಕ್ ಆಫೀಸರ್” ಎಂದು ಹೇಳಿಕೊಳ್ಳುವಾಗ ಸಿಗುವ ಆ ಹೆಮ್ಮೆ ಇದೆಯಲ್ಲ, ಅದಕ್ಕೆ ಬೆಲೆ ಕಟ್ಟಲಾಗದು. ಮಧ್ಯಮ ವರ್ಗದ ನಮ್ಮಂತಹವರಿಗೆ ಇಂತಹ ಅವಕಾಶಗಳು ಪದೇ ಪದೇ ಬರುವುದಿಲ್ಲ. ಅರ್ಜಿ ಹಾಕಲು ಹಣ ಖರ್ಚಾಗಬಹುದು ಅಥವಾ ಓದಲು ಸಮಯ ಬೇಕಾಗಬಹುದು, ಆದರೆ ಒಮ್ಮೆ ನೀವು ಅಲ್ಲಿಗೆ ತಲುಪಿದರೆ ನಿಮ್ಮ ಇಡೀ ತಲೆಮಾರಿನ ಚಿತ್ರಣವೇ ಸಂಪೂರ್ಣವಾಗಿ ಬದಲಾಗುತ್ತದೆ ಅದಕ್ಕಾಗಿ ಇವತ್ತೆ ಒಂದು ಗಟ್ಟಿ ನಿರ್ಧಾರ ತೆಗೆದುಕೊಳ್ಳಿ ನಿಮ್ಮಿಂದ ಇಡೀ ನಿಮ್ಮ ವಂಶವೇ ಬದಲಾಗಿದ್ದು.

Bel Apprentice Rrecruitment 2026 BEL ನೇಮಕಾತಿ 2026: ಪರೀಕ್ಷೆ ಇಲ್ಲದೆ ಸರ್ಕಾರಿ ಕೆಲಸ! ಮಿಸ್ ಮಾಡ್ಬೇಡಿ

16. ಅಭ್ಯರ್ಥಿಗಳಿಗೆ ನನ್ನದೊಂದು ಕಿವಿ ಮಾತು

​ಪರೀಕ್ಷೆ ಅಂದ ತಕ್ಷಣ ಭಯ ಬೇಡ. ಬಹಳಷ್ಟು ಜನ “ಇದು ಆರ್‌ಬಿಐ ಪರೀಕ್ಷೆ, ನಮಗೆಲ್ಲ ಎಲ್ಲಿ ಸಿಗುತ್ತೆ?” ಎಂದು ಅರ್ಜಿ ಹಾಕುವುದೇ ಇಲ್ಲ. ನೆನಪಿಡಿ, ಅಲ್ಲಿ ಕೆಲಸ ಮಾಡುವವರು ಕೂಡ ನಿಮ್ಮ ಹಾಗೆಯೇ ಓದಿದ ಸಾಮಾನ್ಯ ಮನುಷ್ಯರೇ. ಕಠಿಣ ಪರಿಶ್ರಮಕ್ಕಿಂತ ಹೆಚ್ಚಾಗಿ ‘ಸತತ ಪ್ರಯತ್ನ‘ ಇಲ್ಲಿ ಮುಖ್ಯ. ನೀವು ಇವತ್ತೇ ತಯಾರಿ ಆರಂಭಿಸಿದರೆ, ಖಂಡಿತವಾಗಿಯೂ ಜೂನ್ ತಿಂಗಳ ಪರೀಕ್ಷೆಯಲ್ಲಿ ಯಶಸ್ಸು ಕಾಣಬಹುದು. ಸೋಲಿಗೆ ಹೆದರಿ ಅವಕಾಶವನ್ನು ಕೈಬಿಡಬೇಡಿ ನಿಮಗೇನಾದ್ರೂ ಮಾಹಿತಿ ಬೇಕಿದ್ದರೆ ಅಥವಾ ಡೌಟ್ ಇದ್ರೆ ನಾನು ನಿಮ್ಮ ಜೊತೆ ಇರುತ್ತೇನೆ ನನ್ನನ್ನು ನೀವು ಸದಾ ಸಂಪರ್ಕಿಸಬಹುದು ನಾನು ನಿಮ್ಮ ಜೊತೆ ನಿಂತು ನಾನು ನಿಮಗೆ ಒಬ್ಬ ಸ್ನೇಹಿತರಾಗಿ ಸಹಾಯ ಮಾಡುತ್ತೇನೆ.

​FAQ – ಪದೇ ಪದೇ ಕೇಳಲಾಗುವ ಪ್ರಶ್ನೆಗಳು

​1. ಆರ್‌ಬಿಐ ಪರೀಕ್ಷೆಗೆ ಕೋಚಿಂಗ್ ತೆಗೆದುಕೊಳ್ಳಲೇಬೇಕಾ?
ಕೋಚಿಂಗ್ ಕಡ್ಡಾಯವಲ್ಲ. ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ಮತ್ತು ಆನ್‌ಲೈನ್‌ನಲ್ಲಿ ಸಾಕಷ್ಟು ಉಚಿತ ಮಾಹಿತಿಗಳು ಸಿಗುತ್ತವೆ. ನಿಮ್ಮಲ್ಲಿ ಶಿಸ್ತು ಮತ್ತು ಸರಿಯಾದ ಮೆಟೀರಿಯಲ್ ಇದ್ದರೆ ಮನೆಯಲ್ಲೇ ಓದಿ ಪಾಸ್ ಮಾಡಬಹುದು.

​2. ಕೆಲಸ ಸಿಕ್ಕರೆ ಕರ್ನಾಟಕದಲ್ಲೇ ಪೋಸ್ಟಿಂಗ್ ಸಿಗುತ್ತಾ?
ಆರ್‌ಬಿಐ ಒಂದು ರಾಷ್ಟ್ರೀಯ ಸಂಸ್ಥೆಯಾಗಿರುವುದರಿಂದ ಆರಂಭದಲ್ಲಿ ದೇಶದ ಯಾವುದೇ ಭಾಗದಲ್ಲಿ ಕೆಲಸ ನೀಡಬಹುದು. ಆದರೆ ಬೆಂಗಳೂರಿನಲ್ಲೂ ಆರ್‌ಬಿಐ ಕಚೇರಿ ಇರುವುದರಿಂದ, ಭವಿಷ್ಯದಲ್ಲಿ ಇಲ್ಲಿಗೆ ವರ್ಗಾವಣೆ ಕೂಡ ಪಡೆಯುವ ಅವಕಾಶವಿರುತ್ತದೆ.

​3. ಆರ್ಟ್ಸ್ ಅಥವಾ ಕಾಮರ್ಸ್ ಓದಿದವರು ಅರ್ಜಿ ಸಲ್ಲಿಸಬಹುದೇ?
ಹೌದು, ಯಾವುದೇ ವಿಷಯದಲ್ಲಿ (Arts, Commerce, Science) ಕನಿಷ್ಠ 60% ಅಂಕಗಳೊಂದಿಗೆ ಪದವಿ ಪಡೆದಿದ್ದರೆ ಆಫೀಸರ್ ಗ್ರೇಡ್ ‘ಬಿ’ (General) ಹುದ್ದೆಗೆ ಅರ್ಜಿ ನೀವುಗಳು ಸಲ್ಲಿಸಬಹುದು.

​4. ಪರೀಕ್ಷೆಯಲ್ಲಿ ನೆಗೆಟಿವ್ ಮಾರ್ಕಿಂಗ್ ಇರುತ್ತದೆಯೇ?
ಹೌದು, ಆಬ್ಜೆಕ್ಟಿವ್ ಮಾದರಿಯ ಪರೀಕ್ಷೆಯಲ್ಲಿ ತಪ್ಪು ಉತ್ತರ ನೀಡಿದರೆ ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ಆದ್ದರಿಂದ ಗೊತ್ತಿರುವ ಪ್ರಶ್ನೆಗಳಿಗೆ ಮಾತ್ರ ಉತ್ತರಿಸುವುದು ಜಾಣತನ ಮತ್ತು ಉತ್ತಮವಾಗಿರುತ್ತದೆ.

​5. ಐಟಿ (IT) ಹಿನ್ನೆಲೆಯವರಿಗೂ ಇಲ್ಲಿ ಅವಕಾಶ ಇದೆಯೇ?
ಹೌದು, ಆರ್‌ಬಿಐ ಕಾಲಕಾಲಕ್ಕೆ ಐಟಿ ಮತ್ತು ಸಾಫ್ಟ್‌ವೇರ್ ವಿಭಾಗಕ್ಕೂ ನೇಮಕಾತಿ ಮಾಡಿಕೊಳ್ಳುತ್ತದೆ. ಸದ್ಯದ ನೋಟಿಫಿಕೇಶನ್‌ನಲ್ಲಿ ಜನರಲ್ ಅಧಿಕಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

​ (Disclaimer)
​ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಕೇವಲ ಅಭ್ಯರ್ಥಿಗಳ ಜಾಗೃತಿಗಾಗಿ ಮಾತ್ರ. ನಾವು ಅಧಿಕೃತ ಮೂಲಗಳ ಆಧಾರದ ಮೇಲೆ ಮಾಹಿತಿ ನೀಡಲು ಪ್ರಯತ್ನಿಸಿದ್ದೇವೆ. ಆದರೂ, ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಧಿಸೂಚನೆಯನ್ನು ಪೂರ್ತಿಯಾಗಿ ಓದಿಕೊಳ್ಳಿ. ಯಾವುದೇ ಬದಲಾವಣೆಗಳಿಗೆ ನಮ್ಮ ಸಂಸ್ಥೆ ಜವಾಬ್ದಾರಿಯಲ್ಲ. 

​ಮಂಜುನಾಥ್ ಲಾತೂರ.

ಕನ್ನಡ ನಾಡಿನ ಯುವಕರಿಗೆ ಉದ್ಯೋಗ ಮತ್ತು ಶಿಕ್ಷಣದ ಮಾಹಿತಿ ನೀಡುವ ಉದ್ದೇಶದಿಂದ ಈ ಲೇಖನವನ್ನು ಬರೆಯಲಾಗಿದೆ. ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಿರುವ ನಾನು, ಸರಳ ಕನ್ನಡದಲ್ಲಿ ನಿಖರ ಮಾಹಿತಿ ತಲುಪಿಸುವುದರಲ್ಲಿ ಮುಖ್ಯ ಗುರಿಯಾಗಿದೆ.

​ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಕೂಡಲೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ! ಇಂತಹ ಮತ್ತಷ್ಟು ಉದ್ಯೋಗ ಮಾಹಿತಿಗಳಿಗಾಗಿ ನಮ್ಮ ವೆಬ್‌ಸೈಟ್ ಅನ್ನು ಸಬ್‌ಸ್ಕ್ರೈಬ್ ಮಾಡಿಕೊಳ್ಳಿ ಮತ್ತು ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಮರೆಯಬೇಡಿ. ಇಂದೇ ಅರ್ಜಿ ಸಲ್ಲಿಸಿ, ನಿಮ್ಮ ಕನಸಿನ ವೃತ್ತಿ ಆರಂಭಿಸಿ!

1 thought on “RbI jobs karnataka 2026 ರಿಸರ್ವ್ ಬ್ಯಾಂಕ್‌ನಲ್ಲಿ ಭರ್ಜರಿ ನೇಮಕಾತಿ 2026: ಕನ್ನಡಿಗರಿಗೆ ಇಲ್ಲಿದೆ ಸುವರ್ಣಾವಕಾಶ!”

Comments are closed.